ಚಾಮರಾಜನಗರ ಜಿಲ್ಲೆಯ ವಿಶೇಷಚೇತನ ಮಕ್ಕಳಿಗೆ ನೆರವಾದ ಕಿಚ್ಚ ಸುದೀಪ್

Thursday, June 3, 2021

ಕಷ್ಟದಲ್ಲಿರುವವರನ್ನು ಹುಡುಕಿ ಅವರಿಗೆ ನೆರವಾಗುವ ಗುಣ ಕರ್ನಾಟಕದ ಅಭಿನವ ಛಜ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಹೊಸದಲ್ಲ. ಆದರೆ ಬೆಂಗಳೂರಿಗೆ ಅವರನ್ನು ಹುಡುಕಿಕೊಂಡು ಹೋದವರಿಗೆ ಇಂಥ ಸಹಾಯಗಳು ಹೆಚ್ಚಾಗಿ ಸಿಗುತ್ತಿತ್ತು.
ಈಗ ಸುದೀಪ್ ಅಭಿಮಾನಿಗಳ ಬಳಗ ಒಂದು ಟ್ರಸ್ಟ್ ಮಾಡಿಕೊಂಡು ಅಸಹಾಯಕರಿಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸುವ ಮೂಲಕ ಸಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ಗುಂಡ್ಲುಪೇಟೆಯ ವಿಶೇಷ ಮಕ್ಕಳ ವಸತಿ ಗೃಹದ ನೆರವಿಗೆ ಕೈ ಚಾಚಿ ಮಾನವೀಯತೆ ಮೆರೆದಿದ್ದಾರೆ.

ಕಿಚ್ಚ ಸುದೀಪ್ ವಿಶೇಷ ಚೇತನ ಮಕ್ಕಳ ನೆರವಿಗೆ ಕಿಚ್ಚ ಮುಂದಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ವಸತಿ ಶಾಲೆ ಮಕ್ಕಳ ನೆರವಿಗೆ ಕಿಚ್ಚ ಧಾವಿಸಿದ್ದಾರೆ. ಮಳೆಯಿಂದ ಶಾಲೆ ಕಟ್ಟಡ ಸೋರುತ್ತಿತ್ತು. ಲಾಕ್ ಡೌನ್ ನಿಂದ ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದ ಕಿಚ್ಚ ಟ್ರಸ್ಟ್ 40 ಕ್ಕೂ ಹೆಚ್ಚು ಮಕ್ಕಳಿರುವ ಈ ಶಾಲೆಗೆ ನೆರವು ನೀಡಿದೆ.

ಕಿಚ್ಚ ಸುದೀಪ್ ಚಾರಿಟೇಬಲ್ ರಾಜ್ಯ ಮುಖಂಡ ರಮೇಶ್ ಕಿಟ್ಟಿ ಹಾಗೂ ಜಿಲ್ಲಾ ಮುಖಂಡರಾದ ಸೋಮ ನಾಯಕ, ಪರಶಿವ ಅವರ ತಂಡ ಶಾಲೆಗೆ ಭೇಟಿ ನೀಡಿ, ಆಹಾರದ ಕಿಟ್ ವಿತರಿಸಿದೆ. ಜತೆಗೆ ವಸತಿ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿ ಮಾಡಲೂ ನೆರವು ನೀಡುವುದಾಗಿ ತಿಳಿಸಿದ್ದಾರೆ.

Share