ತಾಕತ್ತಿದ್ದರೆ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಮಾಡಿಸಿ: ಶ್ರೀನಿವಾಸ್‌ ಪ್ರಸಾದ್‌ಗೆ ಎಚ್‌ಸಿಎಂ ಪ್ರಶ್ನೆ

Sunday, October 3, 2021

ಚುನಾವಣೆ ಬಂದಾಗ ಸ್ಪರ್ಧಿಸುವ ಕುರಿತು ಯೋಚಿಸೋಣ. ಈಗ ನಿಮಗೆ ತಾಕತ್ತಿದ್ದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಳೆಯನ್ನು ಕಡಿಮೆ ಮಾಡಿಸಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್‌ಗೆ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಸವಾಲು ಹಾಕಿದ್ದಾರೆ.

ಜನ ಸಾಮಾನ್ಯರಿಗೆ ಉಪಯೋಗವಾಗುವ ಅಭಿವೃದ್ಧಿ ಕೆಲಸವನ್ನು ಮಾಡುವ ಬದ್ಧತೆಯಿಲ್ಲದಿದ್ದರೂ ಇಂತಹ ಮಾತುಗಳನ್ನಾಡಲು ಕಮ್ಮಿಯಿಲ್ಲ. ಸಂಸದರಾದ ಪ್ರಸಾದ್ ಅವರೇ ಚುನಾವಣೆ ಬಂದಾಗ ಸ್ಪರ್ಧಿಸುವ ಕುರಿತು ಯೋಚಿಸೋಣ. ಈಗ ನಿಮಗೆ ತಾಕತ್ತಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ದನಿ ಎತ್ತಿ. ರಾಜ್ಯಕ್ಕೆ ಬರಬೇಕಾದ ಜಿ ಎಸ್ ಟಿ ಪಾಲನ್ನು ಕೇಳಿ. ಅಧಿಕಾರದ ಅವಧಿಯಲ್ಲಿ ಸಾಧ್ಯವಾದರೆ ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ಒಂದಷ್ಟು ಉತ್ತಮ ಕೆಲಸವನ್ನು ಮಾಡಿ ಎಂದು ಟಾಂಗ್‌ ನೀಡಿದ್ದಾರೆ.

ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ತಾಕತ್ತು, ಗತ್ತು ಗಮ್ಮತ್ತು, ಗೈರತ್ತು ಎಂದುಕೊಂಡು ಕಾಲಹರಣ ಮಾಡುತ್ತಾ ಅರ್ಥವಿಲ್ಲದಂತೆ ಮಾತನಾಡಬೇಡಿ. ಯಾರ ತಾಕತ್ತು ಅವರಿಗಿರುತ್ತದೆ. ಹೀಗಾಗಿ ನಿಮಗೆ ನಿಜವಾಗಲೂ ತಾಕತ್ತಿದ್ದರೆ ಇರುವ ಅಧಿಕಾರವನ್ನು ಬಳಸಿಕೊಂಡು ಜನ ಸಾಮಾನ್ಯರ ಬದುಕಿಗೆ ನೆರವಾಗಿ, ಇಲ್ಲದೇ ಇದ್ದರೆ ನೀವು ಬರೀ ಮಾತಿನ ಶೂರ, ಪ್ರಚಾರಕ್ಕೆ ಮಾತನಾಡುವ ವ್ಯಕ್ತಿ ಎಂಬುದನ್ನು ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ.

Share