ದೇಗುಲದಲ್ಲಿ ಕಳ್ಳರ ಕೈಚಳಕ: ಹುಂಡಿ ಹಣ ದೋಚಿ ಪರಾರಿ

Sunday, September 12, 2021

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕುರುಬರ ಹೊಸಹಳ್ಳಿ ಗ್ರಾಮದಲ್ಲಿನ ದಂಡು ಮಾರಮ್ಮ ದೇಗುಲದಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ನಡೆದಿದೆ.

ಕುರುಬರ ಹೊಸಹಳ್ಳಿಯ  ದಂಡು ಮಾರಮ್ಮ ದೇಗುಲದಲ್ಲಿ ಬಾಗಿಲು ಹಾಕಿದ್ದಾಗ ಕಳ್ಳರು ಈ ಕೃತ್ಯವೆಸಗಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನ ದೋಚಿ ಪರಾರಿಯಾಗಿದ್ದಾರೆ.  ಇದೇ ದೇವಸ್ಥಾನದಲ್ಲಿ ಆರರಿಂದ ಏಳು ಬಾರಿ ಕಳ್ಳತನವಾಗಿದೆ ಎನ್ನಲಾಗಿದೆ.

ಹಬ್ಬದ ಹಿನ್ನೆಲೆ ಆಭರಣದ ಆಸೆಗಾಗಿ ಕಳ್ಳರು ಕಳ್ಳತನ ಮಾಡಲು ಬಂದಿದ್ದರು. ಆದರೆ ಗ್ರಾಮಸ್ಥರು ಆಭರಣ ಹಬ್ಬದ ದಿನವೇ ತೆಗೆದಿಟ್ಟಿದ್ದರು. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share