ಬೆಂಗಳೂರು: ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ

Saturday, September 25, 2021

ಹಾಡಹಗಲೇ ದುಷ್ಕರ್ಮಿಗಳು ವ್ಯಕ್ತಿ ಓರ್ವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಆವಲಹಳ್ಳಿ ಠಾಣಾ ವ್ಯಾಪ್ತಿಯ ಮಾರ್ಗೊಂಡನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದವರನ್ನು ರಾಮಮೂರ್ತಿನಗರದ ಬೋವಿ ಕಾಲೋನಿ ನಿವಾಸಿ ಕುಳ್ಳ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಆಟೋದಲ್ಲಿ ಬಂದಿದ್ದ ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕುಳ್ಳ ವೆಂಕಟೇಶ್​ ಅವರಿಗೆ  ಮೊದಲು ಡಿಕ್ಕಿ ಹೊಡೆದಿದ್ದಾರೆ. ನಂತರ ಅವರು ಕೆಳಗೆ ಬೀಳುತ್ತಿದ್ದಂತೆ ಐವರು ದುಷ್ಕರ್ಮಿಗಳ ತಂಡ ಲಾಂಗು - ಮಚ್ಚುಗಳಿಂದ ಮಾರಕ ದಾಳಿ ನಡೆಸಿದೆ.  ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಮೀನು ವಿಚಾರವಾಗಿ ಕುಳ್ಳ ವೆಂಕಟೇಶ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆವಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Share