ಶ್ರೀಶಾಂತ್ ನಟನೆಯ ಪಟ್ಟಾ ಚಿತ್ರಕ್ಕೆ ನೀಲಿ ತಾರೆ ಸನ್ನಿ ಲಿಯೋನ್ ನಾಯಕಿ

Tuesday, July 20, 2021

 ಶ್ರೀಶಾಂತ್ ನಟನೆಯ ಪಟ್ಟಾ ಚಿತ್ರಕ್ಕೆ ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ.

ಹೌದು.  ಕ್ರಿಕೆಟಿಗ ಶ್ರೀಶಾಂತ್ ನಟನೆಯ ಹೊಸ ಹಿಂದಿ ಸಿನಿಮಾ ಸದ್ದು ಮಾಡುತ್ತಿದೆ.

ಆರ್ ರಾಧಕೃಷ್ಣನ್ ಕತೆ ಬರೆದು ನಿರ್ದೇಶಕ ಮಾಡುತ್ತಿದ್ದು ‘ಪಟ್ಟಾ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಶ್ರೀಶಾಂತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದಲ್ಲಿ ಶ್ರೀಶಾಂತ್ ಸಿಬಿಐ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿರುವ ಕಾರಣ ಸನ್ನಿ ಲಿಯೋನ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎನ್ನಲಾಗಿದೆ. ಅಂಜಲಿ ಎನ್ನುವ ಪಾತ್ರದಲ್ಲಿ ಸನ್ನಿಲಿಯೋನ್ ನಟಿಸುತ್ತಿದ್ದಾರೆ.

ಅಂದಹಾಗೆ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಶ್ರೀಶಾಂತ್, ಈಗಾಗಲೇ ಹಿಂದಿ ಮಲಯಾಳಂ ಮತ್ತು ಕನ್ನಡದಲ್ಲಿ ಮಿಂಚಿದ್ದಾರೆ.

Share