ಕೆ.ಆರ್.ಎಸ್ ಡ್ಯಾಂ ಕಲ್ಲು ಕುಸಿತದ ಬಗ್ಗೆ ಅಧಿಕಾರಿಗಳಿಂದ ಸಿಗದ ಮಾಹಿತಿ; ಸಂಸದೆ ಸುಮಲತಾ ಅಂಬರೀಶ್ ಬೇಸರ

Monday, July 19, 2021

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ,ಆರ್.ಎಸ್ ಜಲಾಶಯದ ಕಲ್ಲು ಕುಸಿತದ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

ಕೆ.ಆರ್.ಎಸ್ ಜಲಾಶಯದ ಕಲ್ಲು ಕುಸಿತದ ಬಗ್ಗೆ ಮಾಧ್ಯಮದ ಜೂತೆ ಮಾತನಾಡಿದ ಸುಮಲತಾ ಅಂಬರೀಶ್ ಅವರು,  ಜಲಾಶಯದ ಕಲ್ಲು ಕುಸಿತದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಅಧಿಕಾರಿಗಳಿಗೆ ಕರೆ ಮಾಡಿದರೆ  ಗೊಂದಲದ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ಜಲಾಶಯವನ್ನು ರಕ್ಷಿಸುವಂತೆ ನನಗೆ ಅನೇಕ ಕರೆಗಳು ಬರುತ್ತಿವೆ. ಜಲಾಶಯವು ಸುರಕ್ಷಿತವಾಗಿರಲಿ ಎಂಬುದು ನನ್ನ ಬಯಕೆ. ಆದ್ದರಿಂದ  ಒಂದು ವೇಳೆ ಇಂದು ಸದನದಲ್ಲಿ ಅವಕಾಶ ಸಿಕ್ಕಿದರೆ ಜಲಾಶಯದ ಬಗ್ಗೆ ಪ್ರಸ್ತಾಪಿಸುವೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.Share